ಗ್ರೇಡಿಂಗ್ ವ್ಯವಸ್ಥೆ ಆಯ್ಕೆ ಆಧಾರಿತ ಕ್ರೆಡಿಟ್ ವ್ಯವಸ್ಥೆ ನಿರಂತರ/ಸಮಗ್ರ ಮೌಲ್ಯಮಾಪನ ಮತ್ತು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ದಿ ಸೇರಿದಂತೆ ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳು ಮುಂದುವರಿಯುತ್ತಿವೆ. ಪ್ರಸ್ತುತ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಈಗಾಗಲೇ ಅಸ್ತಿತ್ವದಲ್ಲಿರುವ ಡಿಜಿಟಲ್ ಕಲಿಕಾ ವೇದಿಕೆಗಳು ಮಾಹಿತಿ ಸಂವಹನ ಮತ್ತು ತಂತ್ರಜ್ಞಾನ (ICT) ಆಧಾರಿರ ಶೈಕ್ಷಣಿಕ ಉಪಕ್ರಮಗಳನ್ನು ಮತ್ತಷ್ಟು ಉತ್ತಮಗೊಳಿಸಿ ವಿಸ್ತರಿಸಲಾಗುವುದು. ಸಹಕಾರಿ ಕಲಿಕೆ, ವರ್ಚುವಲ್ ಕೆಲಿಕೆಯನ್ನು ಒಳಗೊಂಡಿರುವ ಪ್ರಾಯೋಗಿಕ ಕಲಿಕೆಯ ಉಪಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ಜ್ಞಾನ ಮತ್ತು ಕೌಶ್ಯಲ್ಯಾಭಿವೃದ್ದಿಯಲ್ಲಿ ಸಹಾಯಕವಾಗುತ್ತದೆ. ಅಷ್ಟೇ ಅಲ್ಲದೆ, ೨೧ನೇ ಶತಮಾನದ ಇಂಜಿನಿಯರುಗಳಿಗೆ ಬೇಕಾಗುವ ಕೌಶಲ್ಯಗಳು, ಶಿಕ್ಷಣ ೪.೦ ಹಾಗೂ ಸುಸ್ಥಿರತೆಯ ಗುರಿಗಳನ್ನು ಮತ್ತಷ್ಟು ಹೆಚ್ಚಿಸುವ ಶಿಕ್ಷಣಕ್ಕೆ ಗಮನ ಕೊಡಲಾಗುವುದು. ಎಕ್ಪೊನನ್ಸಿಯಲ್ ತಂತ್ರಜ್ಞಾನಗಳಾದ ಕೃತಕ ಬುದ್ದಿಮತ್ತೆ, ಯಂತ್ರ ಕಲಿಕೆ, ರೊಬೊಟಿಕ್ಸ್, ಆಟೊಮೇಷನ್, ಡೇಟಾ ಸೈನ್ಸ್, ಸಪ್ಲೈಚೈನ್ ಮ್ಯಾನೇಜಮೆಂಟ್, ಮೆಕಾಟ್ರಾನಿಕ್ಸ್, ವೇರಬಲ್ ಎಲೆಕ್ಟ್ರಾನಿಕ್ಸ್, ವರ್ಚುವಲ್ ರಿಯಾಲಿಟಿ, ಫೋಟೊನಿಕ್ಸ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಗಳ ಅಗತ್ಯತೆಗಳನ್ನು ಪಠ್ಯಕ್ರಮವು ಪೂರೈಸುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಸಮಗ್ರ ಕಲಾ ಶಿಕ್ಷಣದ ಮೂಲಕ ಮಾನವನ ಬೌದ್ದಿಕ, ಸಾಮಾಜಿಕ, ದೈಹಿಕ, ಭಾವನ್ಮಾತಕ ಮತ್ತು ನೈತಿಕ ಸಾಮರ್ಥಗಳನ್ನು ಸಮಗ್ರ ರೀತಿಯಲ್ಲಿ ಅಭಿವೃದ್ದಿ ಪಡಿಸಲು ಅಪೇಕ್ಷಿಸಲಾಗಿದೆ. ವಿಶ್ವವಿದ್ಯಾಲಯವು ಅಂತರಶಿಸ್ತೀಯ ಮತ್ತು ಬಹುಶಿಸ್ತೀಯ ಸಂಶೋಧನೆಗಳತ್ತ ಗಮನ ಹರಿಸಿ, ಸರ್ಕಾರ ಮತ್ತು ಉದ್ಯಮಗಳ ಬಹು ಬೇಡಿಕೆಯ ಕ್ಷೇತ್ರಗಳಲ್ಲಿ ಹೊಸ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಇಂಕುಬೇಷನ್, ಸ್ಪಾರ್ಟ ಆಫ್, ಬೌದ್ದಿಕ ಆಸ್ತಿಗಳ ವಾಣಿಜ್ಯಕರಣ ಹಾಗೂ ಪ್ರಕಾಶನಗಳಿಗೆ ಅಗತ್ಯವಾದ ಸಂಶೋಧನೆಗಳನ್ನು ಕೈಗೊಳ್ಳಲು ಸಹಾಯಕವಾಗುತ್ತದೆ. ಇಂಜಿನಿಯರ್‍ರು ಮೇಲಿನ ತಂತ್ರಜ್ಞಾನಗಳನ್ನು ಬಳಸಿಕೊಂಡು ಶಕ್ತಿ, ಕೃಷಿ, ನೀರು, ಹವಾಮಾನ , ಆರೋಗ್ಯ ಮತ್ತು ಸಂಬಂಧಿತ ಕ್ಷೇತ್ರಗಳ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುತ್ತಾರೆ.
ಹೊಸ ಶಿಕ್ಷಣ ವಿಧಾನ, ಹೊಸ ತಂತ್ರಜ್ಞಾನಗಳ ಅಳವಡಿಕೆ, ಸಹಕಾರಿ ಕೆಲಸಗಳ ಮೂಲಕ ಜೀವನ ಪರ್ಯಂತ ಕಲಿಕೆಯನ್ನು ಕೈಗೊಳ್ಳಲಾಗುವುದು. ಸರ್ಕಾರದ ಹೊಸ ಯೋಜನೆಗಳಾದ ಸ್ಪಾರ್ಟ್ ಅಪ್ ಇಂಡಿಯಾ ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಇತರವುಗಳ ಉದ್ಯೋಗ ಒದಗಿಸುವ ಸನ್ನಿವೇಶಗಳ ಸೂಚಕಗಳಾಗಿವೆ. ವಿತಾವಿಯ ಎಲ್ಲಾ ಸಂಸ್ಥೆಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಉತ್ತೇಜಿಸಿ ಹೊಸ ಉತ್ಪನ್ನಗಳು, ಹೊಸ ಪ್ರಕ್ರಿಯೆಗಳು ಮತ್ತು ವ್ಯವಸ್ಥೆಗಳನ್ನು ಅಭಿವೃದ್ದಿಪಡಿಸಿ, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಹಕರಿಸುತ್ತ ವಿತಾವಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿ ಇರುವಂತೆ ಪ್ರೊತ್ಸಾಹಿಸಲಾಗುವುದು.
ವಿದ್ಯಾರ್ಥಿಗಳ ಉತ್ಸಾಹ, ನವೀನ ಕೌಶ್ಯಲ್ಯಾಭಿವೃದ್ದಿ ಹಾಗೂ ಗುರಿಗಳನ್ನು ಕಾರ್ಯಗತಗೊಳಿಸುವಲ್ಲಿ ಸಹಕರಿಸುವುದರ ಜೊತೆಗೆ, ಜೀವನದಲ್ಲಿ ವೈಫಲ್ಯಗಳ ನಿರ್ವಹಣೆ ಹಾಗೂ ಪರಿಸರ ಪ್ರಜ್ಞೆಯೊಂದಿಗೆ ಸಾಮಾಜಿಕ ಅಗತ್ಯಗಳಿಗೆ ಅನುಗುಣವಾಗಿ ಕೆಲಸ ನಿರ್ವಹಿಸಲು ಸಹಕರಿಸುವುದು. ತಾಂತ್ರಿಕ ಶಿಕ್ಷಣದ ಎಲ್ಲ ಭಾಗಿದಾರರು ಪ್ರಸ್ತುತ ವಿಜ್ಞಾನ ತಂತ್ರಜ್ಞಾನ ಮತ್ತು ನಿರ್ವಹಣಾ ಪ್ರವೃತ್ತಿಗಳಿಗುಣವಾಗಿ ನಿರಂತರವಾಗಿ ತಮ್ಮ ಜ್ಞಾನಾಭಿವೃದ್ದಿಯಲ್ಲಿ ತೊಡಗಿಸಿಕೊಳ್ಳುವುದು. ಅಂತೀಮವಾಗಿ, ಶಿಕ್ಷಣ ಮತ್ತು ಸಂಶೋಧನೆಯ ಗುಣಮಟ್ಟವನ್ನು ಸುಧಾರಿಸಲು ಮತ್ತು ರಾಷ್ಟ್ರೀಯ/ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಮಾನ್ಯತೆ/ಶ್ರೇಯಾಂಕವನ್ನು ಪಡೆಯಲು ವಿತಾವಿಗೆ ಸಹಕರಿಸಿ, ಅಭಿವೃದ್ದಿಗೊಂಡ ಸ್ವಾವಲಂಬಿ ಭಾರತವನ್ನು ಕಟ್ಟುವಲ್ಲಿ ನಾನು ಎಲ್ಲ ಶಿಕ್ಷಣಿಕ ಭಾಗಿದಾರರನ್ನು ಈ ಮೂಲಕ ಒತ್ತಾಯಿಸುತ್ತೇನೆ.
ವಿದ್ಯಾರ್ಥಿಗಳ ಸರ್ವಾಂಗೀಣ ಹಾಗೂ ಕೌಶಲ್ಯಭರಿತ ನಾಗರೀಕರನ್ನಾಗಿ ಮಾಡಿ ವಿಕಸಿತ ಭಾರತಕ್ಕೆ ಒಂದು ದೊಡ್ಡ ಕೊಡುಗೆಯನ್ನು ನೀಡಬೇಕು ಎನ್ನುವ ಉದ್ದೇಶದಿಂದ ವಿತಾವಿಯು ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡಿದೆ ಎಂದು ಹೇಳಿದರು. ಈ ಯೋಜನೆಗಳ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಕ್ಯಾಂಪಸ್‍ನಲ್ಲಿ ಅನೇಕ ಔದ್ಯೋಗಿಕ ಮತ್ತು ತಾಂತ್ರಿಕ ಶಿಕ್ಷಣವನ್ನು ಒಂದೇ ವೇದಿಕೆಯಲ್ಲಿ ತಂದು ಇಂಟರ್ನಿಶಿಫ್ ಮತ್ತು ತರಬೇತಿ ಮೂಲಕ ಇಂದಿನ ಔದ್ಯೋಗಿಕ ವಲಯಕ್ಕೆ ಅವಶ್ಯಕತೆ ಇರುವ ಕೌಶಲ್ಯಗಳನ್ನು ನೀಡಲಾಗುತ್ತಿದೆ. ಅದಕ್ಕಾಗಿ ಸಿಎನ್‍ಸಿ ವರ್ಕಶಾಫ್ ಸ್ಥಾಪಿಸಲಾಗಿದೆ ಮತ್ತು ಇದೆ ತರಹ ಕೌಶಲ್ಯ ನೀಡುವ ಪ್ರಯೋಗಾಲಯಗಳನ್ನು ನಿರ್ಮಿಸಲಾಗುತ್ತಿದೆ. ಅದೇ ರೀತಿ ಕೊಪ್ಪಳ ಮತ್ತುಅ ದಾಂಡೇಲಿಯಲ್ಲಿರುವ ಕೌಶಲ್ಯ ಕೇಂದ್ರಗಳಲ್ಲಿ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿವೆ ಮತ್ತು ಸುತ್ತಲಿನ ಇಂಜಿನಿಯರಿಂಗ್ ಕಾಲೇಜುಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಇಂಟರ್ನಿಶಿಫ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ವಿತಾವಿಯ ಉದ್ದೇಶ ಕೇವಲ ತರಬೇತಿ ನೀಡುವುದಲ್ಲದೇ ಅದರ ಜೊತೆಗೆ ವಿದ್ಯಾರ್ಥಿಗಳಲ್ಲಿರುವ ಇನ್ನೊವೇಟಿವ್ ಮತ್ತು ಸೃಜನಶೀಲ ಕೌಶಲ್ಯಗಳನ್ನು ಗುರುತಿಸಿ ಹೊಸ ಆಲೋಚನೆಗಳಿಗೆ ಮೂರ್ತಿರೂಪವನ್ನು ಕೊಟ್ಟು ಹೊಸ ಪ್ರೋಡೆಕ್ಟ ಅಥವಾ ತಮ್ಮದೇ ಸ್ಟಾರ್ಟ ಅಫ್ ಆರಂಭಿಸಲು ವಿತಾವಿಯ ವಿಶ್ವೇಶ್ವರಯ್ಯ ಸಂಶೋಧನೆ ಮತ್ತು ನಾವಿನ್ಯತೆ ಪ್ರತಿಷ್ಠಾನ (ವಿಆರ್‍ಆಯ್‍ಎಫ್) ಮುಖಾಂತರ ಉತ್ತೇಜನ ನೀಡಲಿದೆ ಮತ್ತು ಈ ವರ್ಷ ಕನಿಷ್ಠ ೨೫ ಸ್ಟಾರ್ಟಅಫ್ ಗಳನ್ನು ಹುಟ್ಟುಹಾಕುವ ಗುರಿಯನ್ನು ಇಟ್ಟುಕೊಂಡಿದೆ. ಇದಕ್ಕೆ ನೆರವಾಗುವ ರೀತಿಯಲ್ಲಿ ವಿತಾವಿಯದಲ್ಲಿ ಔದ್ಯೋಗಿಕ ಕ್ಷೇತ್ರದ ದಿಗ್ಗಜರೊಂದಿಗೆ ಎಲ್ಲಿ ಜಿಲ್ಲೆಗಳಲ್ಲಿಲ ಚಿಂತನ-ಮಂಥನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.