
ದೇಶದಲ್ಲಿ ಪ್ರಸಿದ್ಧ ತಾಂತ್ರಿಕ ವಿಶ್ವವಿದ್ಯಾಲಯವೆಂದು ಖ್ಯಾತಿ ಹೊಂದಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅನೇಕ ಜವಾಬ್ದಾರಿ ಮತ್ತು ಅವಕಾಶಗಳೊಂದಿಗೆ ಮುನ್ನಡೆಯುತ್ತಿದೆ. ವಿದ್ಯಾರ್ಥಿ-ಪ್ರಾಧ್ಯಾಪಕರ ನಡುವೆ ಪರಸ್ಪರ ಸಂವಾದಗಳನ್ನು ಪ್ರೋತ್ಸಾಹಿಸುತ್ತಾ, ನಾವೆಲ್ಲರೂ ಜವಾಬ್ದಾರಿಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು. ಜನರು ನಮ್ಮನ್ನು ಮುನ್ನಡೆಸುವ ದಿಕ್ಸೂಚಿಗಳಂತೆ ನೋಡುತ್ತಾರೆ. ಅವರನ್ನು ನಾವು ಎಂದೂ ನಿರಾಸೆಗೊಳಿಸಬಾರದು. ಉತ್ಕೃಷ್ಠಮಟ್ಟದ ಶಿಕ್ಷಣ, ಕಲಿಕೆ, ಸಂಶೋಧನೆ ಮತ್ತು ಹೊಸ ಆವಿಷ್ಕಾರ-ಅನ್ವೇಷಣೆಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡೋಣ.
ಸಮಾಜದ ಶ್ರೇಷ್ಠತೆ, ಘನತೆ ಹೆಚ್ಚಿಸುವ ಮತ್ತು ಸಮಾಜದ ಸೇವೆ ಮಾಡುವ ಮಹತ್ವಾಕಾಂಕ್ಷೆ ಇರಬೇಕು. ಮತ್ತು ಉತ್ತಮ ಭವಿಷ್ಯಕ್ಕಾಗಿ ಅಳತೆ ಮಾನದಂಡಗಳಿರಬೇಕು. ಒಂದು ಪ್ರತಿಷ್ಠಿತ ವಿಶ್ವವಿದ್ಯಾಲಯವಾಗಿ ಮಿಂಚುತ್ತ ಸಮಾಜದ ಘನತೆಯನ್ನು ಅಳೆಯುವ ಮಾನದಂಡವಾಗಬೇಕು. ಜ್ಞಾನದ ಶ್ರೇಷ್ಠತೆ ಮತ್ತು ಖ್ಯಾತಿಯ ಕಾರಣದಿಂದಾಗಿ ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದ ಪ್ರಮುಖ ಪ್ರವರ್ತಕರಾಗಲು ನಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ.