ವಿಷನ್ ,ಮಿಷನ್ ಮತ್ತು ಮ್ಯಾಂಡೇಟ್

ಉದ್ದೇಶ/ವಿಷನ್ 01

ಉದ್ದೇಶ/ವಿಷನ್

“ವಿಜ್ಞಾನ ಹಾಗೂ ತಂತ್ರಜ್ಞಾನ ವಿಷಯಗಳಲ್ಲಿ ಮುಂಚೂಣಿಯಲ್ಲಿದ್ದು, ಜಗತ್ತಿನ ಶ್ರೇಷ್ಟ ತಾಂತ್ರಿಕ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದು. ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟ ಜ್ಞಾನದ ಪ್ರಸರಣ, ಸಂಶೋಧನಾ ವ್ಯಾಸಂಗದ ವಿಸ್ತಾರಣೆ ಹಾಗೂ ತಂತ್ರಜ್ಞಾನದ ಆವಿಷ್ಕಾರದಲ್ಲಿ ನಾಯಕತ್ವವನ್ನು ವಹಿಸುವುದು”.

ಗುರಿ/ಮಿಷನ್ 02

ಗುರಿ/ಮಿಷನ್

“ತಾಂತ್ರಿಕ ಶಿಕ್ಷಣದ ಅಭಿವೃದ್ಧಿಗಾಗಿ ಯೋಜಿಸುವುದು, ಅರ್ಹ, ಸಮರ್ಥ ಹಾಗೂ ಪ್ರತಿಕ್ರಿಯಾಶೀಲರಾದ ತಾಂತ್ರಿಕ ವೃತ್ತಿಪರರನ್ನು ಉತ್ಪಾದಿಸಲು, ಅಗತ್ಯತೆಗೆ ಅನುಗುಣವಾಗಿ ಮೌಲ್ಯಾಧಾರಿತ ತಾಂತ್ರಿಕ ಶಿಕ್ಷಣ ಹಾಗೂ ತರಬೇತಿಯನ್ನು ಸ್ಥಾಪಿಸುವುದು”.

ಆದೇಶ/ಮ್ಯಾಂಡೇಟ್ 03

ಆದೇಶ/ಮ್ಯಾಂಡೇಟ್

“ರಾಜ್ಯದ ಹಾಗೂ ರಾಷ್ಟ್ರೀಯ ನೀತಿಗಳಿಗೆ ಅನುಗುಣವಾಗಿ ತಾಂತ್ರಿಕ ಶಿಕ್ಷಣದ ಯೋಜಿತ ಮತ್ತು ಸುಸ್ಥಿರ ಅಭಿವೃದ್ಧಿಗೆ ಉತ್ತೇಜನ ನೀಡುವ ಸಲುವಾಗಿ ಕರ್ನಾಟಕ ಸರ್ಕಾರವು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ
* ಅರ್ಹ ಹಾಗೂ ಸೂಕ್ತವಾದ ಮಾನವ ಸಂಪನ್ಮೂಲವನ್ನು ತಯಾರಿಸುವ ಸಲುವಾಗಿ ಅಗತ್ಯತೆಗೆ ಆಧಾರಿತ ಕೋರ್ಸ್ ಗಳನ್ನು ವಿನ್ಯಾಸ ಮಾಡುವುದು.
* ವಿದ್ಯಾರ್ಥಿಗಳು, ಕೋರ್ಸ್ಗಳು ಹಾಗೂ ಸಂಸ್ಥೆಗಳಿಗೆ ವಸ್ತುನಿಷ್ಠ ಮೌಲ್ಯಮಾಪನ ಮತ್ತು ಪ್ರಮಾಣೀಕರಣ ವ್ಯವಸ್ಥೆಯನ್ನು ಸ್ಥಾಪಿಸುವುದು.
* ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಶಾಸನಬದ್ಧ ಸಂಸ್ಥೆಗಳಾದ AICTE,MHRD,UGC ಮುಂತಾದವುಗಳೊಂದಿಗೆ ಸಹಭಾಗಿತ್ವವನ್ನು ಏರ್ಪಡಿಸುವುದು.”.